69TH KANNADA RAJYOSTAVA

01-Nov-2024

ನಾಡು ನುಡಿಗೆ ನಮನ ಚನ್ನಗಿರಿಯ ಧೃವ ಶಿಕ್ಷಣ ಸಂಸ್ಥೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಂದು ಮುಂಜಾನೆ ಶಾಲೆಗೆ ಆಗಮಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಕನ್ನಡ ಶಿಕ್ಷಕಿಯಾದ ಶ್ರೀಮತಿ ರಾಧಾ ಎಂ ಪಿ ಅವರು ಹೂಗುಚ್ಛ ನೀಡುವುದರ ಮೂಲಕ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಶಾಲೆಯ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯರವರು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿಗಳಾದ ಶ್ರೀಯುತ ಪ್ರಶಾಂತ್ ಕೆ ಸಿ ಅವರು ಕನ್ನಡ ಭಾಷೆ ಬಳಸುವುದು ಮುಖ್ಯವಲ್ಲ ಸರಿಯಾದ ಕ್ರಮದಲ್ಲಿ ಬಳಸುವುದು ಮುಖ್ಯ ಎ೦ದು ಆ ಮೂಲಕ ಕನ್ನಡ ಅಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕನ್ನಡ ಭಾಷೆಯ ಹಿನ್ನೆಲೆ ಮಹತ್ವವನ್ನು ತಮ್ಮ ಭಾಷಣದ ಮೂಲಕ ತಿಳಿಸಿದ ಶಿಕ್ಷಕರಾದ ಶ್ರೀ. ಶಶಿಕುಮಾರ್ ರವರು ಮಕ್ಕಳಲ್ಲಿ ಮನದಲ್ಲಿ ಕನ್ನಡ ಅಭಿಮಾನ ಮೂಡಿಸಿದರು. ವಿದ್ಯಾರ್ಥಿಗಳಾದ ಮಧುಮತಿ ಹಾಗೂ ನಿಹಾಲ್ ಕನ್ನಡ ರಾಜಮನೆತನದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿ ಅವರಿಗೆ ಗೌರವವನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರು ಶ್ರೀಮತಿ ಶಾಂತಿ ಎಂ ಪಿ, ಆಡಳಿತ ಅಧಿಕಾರಿಗಳು ಶ್ರೀಯುತ ನಟರಾಜ್ ಎಸ್ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಕಲ್ಲೇಶ್ ರವರು ಸರ್ವರನ್ನು ಸ್ವಾಗತಿಸಿದರೆ, ಶಿಕ್ಷಕಿಯಾದ ಶ್ರೀಮತಿ ಪ್ರೀತಿರವರು ವಂದಿಸಿದರು , ಹಾಗೂ ಶಿಕ್ಷಕರಾದ ಶ್ರೀ ಚಂದ್ರಯ್ಯ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು